ಗ್ಯಾಸ್‌ ಕೊರತೆ: ನಕಲಿ ಲಿಂಕ್‌, ಆ್ಯಪ್‌, APK ಫೈಲ್‌ ಬಗ್ಗೆ ಎಚ್ಚರಿಕೆ

Homeತಂತ್ರಜ್ಞಾನವಿಶೇಷ ಲೇಖನ

ಗ್ಯಾಸ್‌ ಕೊರತೆ: ನಕಲಿ ಲಿಂಕ್‌, ಆ್ಯಪ್‌, APK ಫೈಲ್‌ ಬಗ್ಗೆ ಎಚ್ಚರಿಕೆ

ವಾಣಿಜ್ಯ ಅನಿಲ ಸಿಲಿಂಡರ್‌ ಕೊರತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್‌ ವಂಚಕರು, ಗ್ಯಾಸ್‌ ಬುಕ್ಕಿಂಗ್‌ ಹೆಸರಿನಲ್ಲಿ ನಕಲಿ ಸಂದೇಶಗಳು ಹಾಗೂ ಲಿಂಕ್‌ಗಳನ್ನು ಜನರಿಗೆ ಕಳುಹಿ

ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
AI ತಂತ್ರಜ್ಞಾನ ಬೆಳವಣಿಗೆ

ವಾಣಿಜ್ಯ ಅನಿಲ ಸಿಲಿಂಡರ್‌ ಕೊರತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್‌ ವಂಚಕರು, ಗ್ಯಾಸ್‌ ಬುಕ್ಕಿಂಗ್‌ ಹೆಸರಿನಲ್ಲಿ ನಕಲಿ ಸಂದೇಶಗಳು ಹಾಗೂ ಲಿಂಕ್‌ಗಳನ್ನು ಜನರಿಗೆ ಕಳುಹಿಸುತ್ತಿದ್ದಾರೆ. “ತಕ್ಷಣ ಗ್ಯಾಸ್‌ ಸಿಗಲಿದೆ”, “OTP ಹಂಚಿದರೆ ಸಿಲಿಂಡರ್‌ ಮನೆಗೆ ಬರುತ್ತದೆ” ಎಂಬ ರೀತಿಯ ಮೋಸದ ಸಂದೇಶಗಳು ಹೆಚ್ಚು ಹರಡುತ್ತಿವೆ.

ಸಾಮಾನ್ಯವಾಗಿ ಇಂತಹ ವಂಚಕರು ಗ್ಯಾಸ್‌ ಏಜೆನ್ಸಿ ಅಥವಾ ಕಂಪೆನಿಗಳ ಹೆಸರಿನಲ್ಲಿ ಕರೆಮಾಡಿ ಅಥವಾ ಸಂದೇಶ ಕಳುಹಿಸಿ ಗ್ರಾಹಕರಿಂದ OTP ಕೇಳುವ ಸಾಧ್ಯತೆ ಇದೆ. ಯಾವುದೇ ಸಂದರ್ಭದಲ್ಲೂ OTP ಹಂಚಿಕೊಳ್ಳಬಾರದು. OTP ನೀಡಿದರೆ ಕ್ಷಣಾರ್ಧದಲ್ಲೇ ಬ್ಯಾಂಕ್‌ ಖಾತೆಯಿಂದ ಹಣ ಕಳವಾಗುವ ಅಪಾಯವಿದೆ.

ಗ್ಯಾಸ್‌ ಬುಕ್ಕಿಂಗ್‌ಗಾಗಿ ಅಧಿಕೃತ ಕಂಪೆನಿಗಳು OTP ಕೇಳುವುದಿಲ್ಲ. ಆದ್ದರಿಂದ ಗ್ಯಾಸ್‌ ಬುಕ್ಕಿಂಗ್‌ ಮಾಡಲು ಕೇವಲ ಅಧಿಕೃತ ಮೊಬೈಲ್‌ ಆ್ಯಪ್‌, ವೆಬ್‌ಸೈಟ್‌ ಅಥವಾ ನೋಂದಾಯಿತ ಫೋನ್‌ ಸಂಖ್ಯೆಗಳನ್ನೇ ಬಳಸಬೇಕು.

ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಲಿಂಕ್‌ಗಳು, ಆ್ಯಪ್‌ಗಳು ಹಾಗೂ APK ಫೈಲ್‌ಗಳು ಹರಡುತ್ತಿವೆ. ಇಂತಹ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದು ಅಥವಾ ಅನುಮಾನಾಸ್ಪದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದು ಅಪಾಯಕಾರಿಯಾಗಿದೆ. ಇದರಿಂದ ವೈಯಕ್ತಿಕ ಮಾಹಿತಿ ಕಳವಾಗುವ ಜೊತೆಗೆ ಬ್ಯಾಂಕ್‌ ಖಾತೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್‌ ಇಲಾಖೆ ಮನವಿ ಮಾಡಿದೆ.

COMMENTS

WORDPRESS: 0
DISQUS: 1