ಮಾಬುಕಳದಲ್ಲಿ ಭೀಕರ ಅಪಘಾತ: ಟ್ರಕ್ ಡಿಕ್ಕಿಗೆ ಸ್ಕೂಟಿ ಸವಾರೆ ಮಹಿಳೆ ಸ್ಥಳದಲ್ಲೇ ಸಾವು

Homeಸ್ಥಳೀಯ ಸುದ್ದಿ

ಮಾಬುಕಳದಲ್ಲಿ ಭೀಕರ ಅಪಘಾತ: ಟ್ರಕ್ ಡಿಕ್ಕಿಗೆ ಸ್ಕೂಟಿ ಸವಾರೆ ಮಹಿಳೆ ಸ್ಥಳದಲ್ಲೇ ಸಾವು

ಉಡುಪಿ ಜಿಲ್ಲೆಯ ಮಾಬುಕಳದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.   ಮೃತರನ್ನು ಉಪ

ಉಡುಪಿ–ದಕ್ಷಿಣ ಕನ್ನಡದಲ್ಲಿ ಮಳೆಯ ಮುನ್ಸೂಚನೆ
ಬೇಸಿಗೆ ತಾಪಮಾನ ಹೆಚ್ಚಳ: ಶಾಖದ ಹೊಡೆತದಿಂದ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ – ಜಿಲ್ಲಾಧಿಕಾರಿ
ಬೈಂದೂರಿನಲ್ಲಿ ರಸ್ತೆ ದುರಸ್ತಿ ಕಾರ್ಯ ಆರಂಭ

ಉಡುಪಿ ಜಿಲ್ಲೆಯ ಮಾಬುಕಳದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

 

ಮೃತರನ್ನು ಉಪ್ಪಿನಕೋಟೆ ಸಾಲಿಕೇರಿ ನಿವಾಸಿ ನಿರ್ಮಲಾ (54) ಎಂದು ಗುರುತಿಸಲಾಗಿದೆ. ಅವರು ತಮ್ಮ ಪುತ್ರಿ ನಿರೀಕ್ಷಾ ಅವರೊಂದಿಗೆ ಸಾಲಿಗ್ರಾಮದ ಆಂಜನೇಯ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮಾಬುಕಳ ಸೇತುವೆ ಸಮೀಪ ಬ್ರಹ್ಮಾವರದಿಂದ ಕೋಟ ಕಡೆಗೆ ಸಾಗುತ್ತಿದ್ದ ತೆಲಂಗಾಣ ನೋಂದಣಿಯ ಟ್ರಕ್, ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ನಿರ್ಮಲಾ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.

ಅಪಘಾತದಲ್ಲಿ ಗಾಯಗೊಂಡ ನಿರೀಕ್ಷಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಮಾಹಿತಿ ಪಡೆದ ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

COMMENTS

WORDPRESS: 0
DISQUS: 0